ವಚನ - 110     
 
ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ | ತಿರುಗಿಸಲಿ ತನ್ನ ದೃಷ್ಟಿಯನು ನಿರ್ಮಲದಿಂ || ನಿರತಿಶಯ ಸುಖವಲ್ಲಿ, ವಿಶ್ವಾತ್ಮವೀಕ್ಷೆಯಲಿ | ಪರಸತ್ತ್ವಶಾಂತಿಯಲಿ – ಮಂಕುತಿಮ್ಮ || ಕಗ್ಗ ೧೧೦ ||