ವಚನ - 117     
 
ಮೃತನ ಸಂಸಾರಕಥೆ ಶವವಾಹಕರಿಗೇಕೆ? | ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ || ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು | ಧೃತಿಯ ತಳೆ ನೀನಂತು – ಮಂಕುತಿಮ್ಮ || ಕಗ್ಗ ೧೧೭ ||