ವಚನ - 124     
 
ಋಣವ ತೀರಿಸಬೇಕು, ಋಣವ ತೀರಿಸಬೇಕು | ಋಣವ ತೀರಿಸುತ ಜಗದಾದಿಸತ್ತ್ವವನು || ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು | ಮನೆಯೊಳಗೆ ಮಠ ನಿನಗೆ – ಮಂಕುತಿಮ್ಮ || ಕಗ್ಗ ೧೨೪ ||