ವಚನ - 220     
 
ನೆನೆನೆನೆದು ಗಹನವನು, ಜೀವನರಹಸ್ಯವನು | ಮನವ ಬಳಲಿಸಿ ಸೋಲಿಸಿರುವ ತತ್ತ್ವವನು || ಮನನದೇಕಾಂತದಲಿ ಮೌನದ ಧ್ಯಾನದಲಿ | ಮಣಿಮಣಿದು ಕೈಮುಗಿಯೊ – ಮಂಕುತಿಮ್ಮ || ಕಗ್ಗ ೨೨೦ ||