ವಚನ - 245     
 
ಋಣದ ಜಾಲವನಂತ, ಕರುಮಚಕ್ರವನಂತ | ಜನುಮಜನುಮದ ಕಥೆಯ ತಂತುಗಳನಂತ || ಅನವರತ ನೂತನವಿದೆನಿಪ ವಿಶ್ವದ ತಂತ್ರ | ಬಿನದ ಪರಬೊಮ್ಮಂಗೆ – ಮಂಕುತಿಮ್ಮ || ಕಗ್ಗ ೨೪೫ ||