ವಚನ - 302     
 
ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೊ | ಕೊನೆಗೆ ಕಾಡೊಳೊ ಮಸಣದೊಳೊ ಮತ್ತೆಲ್ಲೋ || ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು | ನೆನೆಯದಾತ್ಮದ ಸುಖವ – ಮಂಕುತಿಮ್ಮ || ಕಗ್ಗ ೩೦೨ ||