ವಚನ - 310     
 
ಔದಾರ್ಯ ತಾಯಿ ನೀತಿಗೆ, ಧೈರ್ಯವೇ ತಂದೆ | ಸ್ವಾಧಿಪತ್ಯದೆ ನೀನು ಬಾಳನಾಳುವೊಡೆ || ಹೋದುದನು ನೆನೆಯದಿರು, ಬರುವುದಕೆ ಸಿದ್ಧನಿರು | ಆದನಿತು ಸಂತೋಷ – ಮಂಕುತಿಮ್ಮ || ಕಗ್ಗ ೩೧೦ ||