ವಚನ - 411     
 
ನೆರಳನಿನಿತನು ಕೊಡುವ, ದಣಿವನಿನಿತನು ಕಳೆವ | ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ || ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ | ಪರಮಧರ್ಮವದೆಲವೊ – ಮಂಕುತಿಮ್ಮ || ಕಗ್ಗ ೪೧೧ ||