ವಚನ - 428     
 
ನರರವೊಲೆ ಸುರರುಮಲೆದಲೆದು ಮರೆಯಾಗಿಹರು | ಭರತದೇಶದೊಳಮೈಗುಪ್ತಯವನರೊಳಂ || ಸುರ ನಾಮ ರೂಪಗಳಸಂಖ್ಯಾತ, ನಿಜವೊಂದು | ತೆರೆ ಕೋಟಿ ಕಡಲೊಂದು – ಮಂಕುತಿಮ್ಮ || ಕಗ್ಗ ೪೨೮ ||