ವಚನ - 456     
 
ಸ್ಥಿರ ಹಿಮಾಚಲ ಬೊಮ್ಮ, ಚರ ಜಾಹ್ನವಿಯೆ ಮಾಯೆ | ಪರಸತ್ತ್ವಘನದ ವಿದ್ರವರೂಪ ವಿಶ್ವ || ಪರಮಾರ್ಥಕೊಂದಕ್ಷಿ ವ್ಯವಹಾರಕಿನ್ನೊಂದು | ಎರಡುಮೊಂದಾಂತರ್ಯ – ಮಂಕುತಿಮ್ಮ || ಕಗ್ಗ ೪೫೬ ||