ವಚನ - 504     
 
ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ ಬಡವರಿಂಗುಪಕೃತಿಯೊ, ಆವುದೋ ಮನದ || ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ | ಬಿಡುಗಡೆಯೊ ಜೀವಕ್ಕೆ – ಮಂಕುತಿಮ್ಮ || ಕಗ್ಗ ೫೦೪ ||