ವಚನ - 669     
 
ಕಾಯಕಿಂತಾತ್ಮ ಪಿರಿದೆಂದು ಜನವರಿತಂದು | ಸ್ವೀಯೇಚ್ಛೆಯಿಂ ಸಮಾಧಾನ ಕೆಡದಂದು || ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು | ಶ್ರೇಯ ನೆರೆವುದು ಜಗಕೆ – ಮಂಕುತಿಮ್ಮ || ಕಗ್ಗ ೬೬೯ ||