ವಚನ - 747     
 
ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ | ಭೂಮಿಭಾರವನಿಳುಹೆ ಸಾಲದಾಗಿರಲು || ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? | ಕ್ಷೇಮವೆಂದುಂ ಮೃಗ್ಯ – ಮಂಕುತಿಮ್ಮ || ಕಗ್ಗ ೭೪೭ ||