ವಚನ - 773     
 
ಕಾರಿರುಳೊಳಾಗಸದಿ ತಾರೆ ನೂರಿದ್ದೇನು? | ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು || ದೂರದಾ ದೈವವಂತಿರಲಿ, ಮಾನುಷಸಖನ | ಕೋರುವುದು ಬಡಜೀವ – ಮಂಕುತಿಮ್ಮ || ಕಗ್ಗ ೭೭೩ ||