ವಚನ - 799     
 
ಮರಣದಿಂ ಮುಂದೇನು? ಪ್ರೇತವೋ? ಭೂತವೋ? | ಪರಲೋಕವೋ? ಪುನರ್ಜನ್ಮವೊ? ಅದೇನೋ! || ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ | ಧರೆಯ ಬಾಳ್ಗದರಿನೇಂ? – ಮಂಕುತಿಮ್ಮ || ಕಗ್ಗ ೭೯೯ ||