ವಚನ - 808     
 
ಕಾಯಮಾತ್ರದುದಲ್ಲವಾತ್ಮಮಾತ್ರದುದಲ್ಲ- | ವಾಯೆರಡುಮೊಂದಾಗಲದು ಜೀವಲೀಲೆ || ತಾಯಿವೊಲು ನಿನಗಾತ್ಮ, ಮಡದಿವೊಲು ಕಾಯವವ- | ರಾಯವನು ಸರಿನೋಡು – ಮಂಕುತಿಮ್ಮ || ಕಗ್ಗ ೮೦೮ ||