ವಚನ - 882     
 
ಜನಕಜೆಯ ದರುಶನದಿನಾಯ್ತು ರಾವಣ ಚಪಲ | ಕನಕಮೃಗದರುಶನದೆ ಜಾನಕಿಯ ಚಪಲ || ಜನವವನ ನಿಂದಿಪುದು, ಕನಿಕರಿಪುದಾಕೆಯಲಿ | ಮನದ ಬಗೆಯರಿಯದದು – ಮಂಕುತಿಮ್ಮ || ಕಗ್ಗ ೮೮೨ ||