ವಚನ - 120     
 
ನಯದಿಂದ ಸೋಕು, ನೀಂ ದಯೆಯಿಂದ ನೋಡದನು | ಭಯದಿನೋಲಗಿಸು, ನೀಂ ಪೂಜೆಗೈಯದನು || ಸ್ವಯಮಂಕುರಿತ ಸಕಲ ವಿಶ್ವಸತ್ತ್ವವೊ; ಜೀವ | ಪ್ರಿಯತಮವೊ ಸೃಷ್ಟಿಯಲಿ – ಮಂಕುತಿಮ್ಮ || ಕಗ್ಗ ೧೨೦ ||