ವಚನ - 121     
 
ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು | ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು || ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು | ಬದುಕೆಂಬುದಿದು ತಾನೆ? – ಮಂಕುತಿಮ್ಮ || ಕಗ್ಗ ೧೨೧ ||