ವಚನ - 212     
 
ಕಲ್ಲಾಗಿ ನಿಲ್ಲುವನು, ಬಳ್ಳಿವೊಲು ಬಳುಕುವನು | ಮುಳ್ಳಾಗಿ ಚುಚ್ಚುವನು, ಫುಲ್ಲ ಸುಮವಹನು || ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು | ಕ್ಷುಲ್ಲಮಾನಿಸನಿವನು – ಮಂಕುತಿಮ್ಮ || ಕಗ್ಗ ೨೧೨ ||