ವಚನ - 217     
 
ಕುದಿ ಹೆಚ್ಚೆ ವೆಗಟಹುದು; ಕಡಮೆಯಿರೆ ಹಸಿನಾತ | ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ || ಅದರವೊಲೆ ಮನದ ಹದ; ಅದನೆಚ್ಚರದಿ ನೋಡು | ಬದುಕು ಸೊಗ ಹದದಿಂದ – ಮಂಕುತಿಮ್ಮ || ಕಗ್ಗ ೨೧೭ ||