ವಚನ - 296     
 
ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ | ಸನ್ನಾಹ ಸಾಗೀತೆ? ದೈವವೊಪ್ಪೀತೆ? || ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ, | ನಿನ್ನ ಬಲವನು ಮೆರಸೊ – ಮಂಕುತಿಮ್ಮ || ಕಗ್ಗ ೨೯೬ ||