ವಚನ - 595     
 
ತಿರಿದನ್ನವುಂಬಂಗೆ ಹುರುಡೇನು, ಹಟವೇನು | ತಿರುಪೆಯಿಡುವರು ಕುಪಿಸಿ ಬಿರುನುಡಿಯ ನುಡಿಯೆ || ದುರದುರನೆ ನೋಡಿ ನೀನೆದುರುನುಡಿ ನುಡಿಯುವುದೆ? | ಗರುವವೇತಕೆ ನಿನಗೆ? – ಮಂಕುತಿಮ್ಮ || ಕಗ್ಗ ೫೯೫ ||