ವಚನ - 758     
 
ಲೋಕವೆಲ್ಲವು ದೈವಲೀಲೆಯೆಂಬರೆ, ಪೇಳಿ | ಶೋಕ ಸೋಂಕಿರದೊಡಾ ಲೀಲೆ ನೀರಸವೇಂ? || ಮೂಕಂಗೆ ಕಳ್ ಕುಡಿಸಿ ಚೇಳ್ ಕುಟಕಿಪಾಟವಿದು | ಏಕಪಕ್ಷದ ಲೀಲೆ – ಮಂಕುತಿಮ್ಮ || ಕಗ್ಗ ೭೫೮ ||