ವಚನ - 932     
 
ಸಾರ್ವಲೌಕಿಕಸೌಖ್ಯ ನೆಲಸುವನ್ನೆಗಮಿಳೆಯೊ- | ಳೊರ್ವನುಂ ಸುಖಿಯಲ್ತು, ದಿಟದಿ, ಪೂರ್ಣದಲಿ || ಒರ್ವನುಬ್ಬಸದ ಬಿಸಿ ವಿಷವಾಯುವಾಗಿ ತಾ | ನುರ್ವರೆಯ ಮುಸುಕೀತು – ಮಂಕುತಿಮ್ಮ || ಕಗ್ಗ ೯೩೨ ||