ವಚನ - 271     
 
ತೆರಪನರಿಯದೆ ಪರಿವ ಕಾಲಪ್ರವಾಹದಲಿ | ಪುರುಷರಚಿತಗಳೆನಿತೊ ತೇಲಿಹೋಗಿಹವು || ಪುರ ರಾಷ್ಟ್ರ ದುರ್ಗಗಳು, ಮತ ನೀತಿ ಯುಕ್ತಿಗಳು | ಪುರುಷತನ ನಿಂತಿಹುದು – ಮಂಕುತಿಮ್ಮ || ಕಗ್ಗ ೨೭೧ ||